ದಳವಾಯಿ ಮಗ ಯಾರು? ‘ಘೋಸ್ಟ್ 2’ನಲ್ಲಿ ಉತ್ತರಿಸುತ್ತಾರಂತೆ ಶ್ರೀನಿ

ಚಂದನವನ, ಸಿನಿ ಸುದ್ದಿ

ಶಿವರಾಜಕುಮಾರ್‍ ಅಭಿನಯದ ‘ಘೋಸ್ಟ್’ ಚಿತ್ರವು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ನೋಡಿದ ಬಹಳಷ್ಟು ಮಂದಿ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಇನ್ನೂ ಕೆಲವರಿಗೆ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಆ ಎಲ್ಲ ಪ್ರಶ್ನೆಗಳಿಗೂ ‘ಘೋಸ್ಟ್ 2’ ಚಿತ್ರದಲ್ಲಿ ಉತ್ತರಿಸುವುದಾಗಿ ನಿರ್ದೇಶಕ ಶ್ರೀನಿ ಹೇಳಿಕೊಂಡಿದ್ದಾರೆ.

‘ಘೋಸ್ಟ್’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲೇ ಅದರ ಮುಂದುವರೆದ ಭಾಗ ಬರುತ್ತದೆ ಎಂದು ಚಿತ್ರತಂಡ ಘೋಷಿಸಿತ್ತು. ಚಿತ್ರದಲ್ಲೊಂದು ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್‍ ನಟ ಅನುಪಂ ಖೇರ್‍ ಸಹ ತಮ್ಮ ಪಾತ್ರ ಮೊದಲ ಭಾಗದಲ್ಲಿ ಅಷ್ಟೇನೂ ಇರುವುದಿಲ್ಲ, ಮುಂದುವರೆದ ಭಾಗದಲ್ಲಿ ಹೆಚ್ಚಾಗಿರುತ್ತದೆ ಎಂದು ಮೊದಲೇ ಹೇಳಿಕೆ ನೀಡಿದ್ದರು.

ಅದಕ್ಕೆ ಸರಿಯಾಗಿ, ಚಿತ್ರದಲ್ಲಿ ಒಂದಿಷ್ಟು ಉತ್ತರವಿಲ್ಲದ ಪ್ರಶ್ನೆಗಳಿವೆ. ಪ್ರಮುಖವಾಗಿ ಚಿನ್ನ ಎಲ್ಲಿತ್ತು, ಅದನ್ನು ಬೋಟ್‍ಗಳ ಮೂಲಕ ಯಾರಿಗೆ ಸಾಗಿಸಲಾಯಿತು? ದಳವಾಯಿ ಬದುಕಿದ್ದಾನಾ? ಮುಂತಾದ ಪ್ರಶ್ನೆಗಳು ಎದ್ದಿದ್ದವು. ಸಹಜವಾಗಿಯೇ ಈ ಎಲ್ಲ ಪ್ರಶ್ನೆಗಳಿಗೂ ಮುಂದುವರೆದ ಭಾಗದಲ್ಲಿ ಸಿಗಬೇಕಿದೆ. ಈ ವಿಷಯವನ್ನು ಶ್ರೀನಿ ಸಹ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಈ ಕುರಿತಾಗಿ ಟ್ವೀಟ್‍ ಮಾಡಿರುವ ಅವರು, ‘ದಳವಾಯಿ ಬದುಕಿದ್ದಾನಾ? ಅಂಡರ್‍ಪಾಸ್‍ ಒಳಗಡೆ ಕಾರ್‍ ಮತ್ತು ಬೈಕ್‍ಗಳು ಹೇಗೆ ಬಂದವು? ಶಿವಣ್ಣ ಪ್ರತಿಮೆ ಒಳಗಡೆ ಹೇಗೆ ಹೋದರು? ಬೋಟ್‍ಗಳನ್ನು ಆಪರೇಟ್‍ ಮಾಡುತ್ತಿದ್ದವರು ಯಾರು? ದಳವಾಯಿ ಮಗ ಯಾರು? ಮುಂತಾದ ಎಲ್ಲ ಪ್ರಶ್ನೆಗಳಿಗೆ ‘ಘೋಸ್ಟ್ 2’ನಲ್ಲಿ ಉತ್ತರ ಸಿಗಲಿದೆ’ ಎಂದು ಸೋಷಿಯಲ್‍ ಮೀಡಿಯಾ ಮೂಲಕ ಹೇಳಿದ್ದಾರೆ.

ಸರಸ್ವತಿ ಬಿಟ್ಟು ಲಕ್ಷ್ಮೀ ಹಿಂದೆ ಹೋಗಿ ತಪ್ಪು ಮಾಡಿಬಿಟ್ಟೆ: ಅಣಜಿ ನಾಗರಾಜ್‍

Latest Post

You may also like

0 Comments

Leave a Reply

This site uses Akismet to reduce spam. Learn how your comment data is processed.

%d