ಒಂದು ದಿನ ಮೊದಲೇ ‘ಟಗರು ಪಲ್ಯ’ವನ್ನು ಇಲ್ಲೆಲ್ಲಾ ನೋಡಬಹುದು

ಚಂದನವನ, ಸಿನಿ ಸುದ್ದಿ

ಡಾಲಿ ಪಿಕ್ಚರ್ಸ್ನಲ್ಲಿ ಧನಂಜಯ್‍ ನಿರ್ಮಿಸುತ್ತಿರುವ ಮೂರನೇ ಚಿತ್ರ ‘ಟಗರು ಪಲ್ಯ’ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಚಿತ್ರವು ಅ.27ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಒಂದು ದಿನ ಮುಂಚೆಯೇ ಅಂದರೆ ಅ. 26ರಂದು ರಾಜ್ಯದ ಹಲವು ಕಡೆ ಪ್ರೀಮಿಯರ್‍ ಪ್ರದರ್ಶನ ಕಾಣಲಿವೆ.

‘ಟಗರು ಪಲ್ಯ’ ಚಿತ್ರದ ಪ್ರೀಮಿಯರ್‍ ಪ್ರದರ್ಶನಗಳು ಸದ್ಯಕ್ಕೆ ಬೆಂಗಳೂರಿನ ವೀರೇಶ್‍ ಸಿನಿಮಾಸ್‍, ಪಿವಿಆರ್‍ ಒರಾಯನ್‍, ಪಿವಿಆರ್‍ ವೆಗಾ ಸಿಟಿ, ಪಿವಿಆರ್‍ ಜಿಟಿ ಮಾಲ್‍, ಪಿವಿಆರ್‍ ಗ್ಲೋಬಲ್‍, ಪಿವಿಆರ್‍ ವೈಷ್ಣವಿ, ಪಿವಿಆರ್‍ ಸೂಪರ್‍ ಪ್ಲೆಕ್ಸ್ ಫೋರಂ ಮಾಲ್‍, ಮಿರಾಜ್‍ ಸಿನಿಮಾಸ್‍, ರಾಕ್‍ಲೈನ್‍ ಸಿನಿಮಾಸ್‍, ಸಿನಿಪೊಲೀಸ್‍ ಶಾಂತಿನಿಕೇತನ್‍ ಮುಂತಾದ ಕಡೆ ಗುರುವಾರ ರಾತ್ರಿ 7ರ ನಂತರ ನಡೆಯಲಿದೆ.

ಬೆಂಗಳೂರು ಮಾತ್ರವಲ್ಲ, ಶಿವಮೊಗ್ಗದ ಭರತ್‍ ಸಿನಿಮಾಸ್‍ನಲ್ಲಿ ರಾತ್ರಿ 7.30ಕ್ಕೆ, ಮೈಸೂರಿನ ಡಿಆರ್ಸಿ ಸಿನಿಮಾಸ್‍ನಲ್ಲಿ ರಾತ್ರಿ 7.10ಕ್ಕೆ, ತುಮಕೂರಿನ ಇನಾಕ್ಸ್ ಎಸ್‍ ಮಾಲ್‍ನಲ್ಲಿ ರಾತ್ರಿ 7.10ಕ್ಕೆ ಚಿತ್ರದ ಪ್ರೀಮಿಯರ್‍ ಪ್ರದರ್ಶನಗಳು ಕಾಣಲಿವೆ. ಇದಲ್ಲದೆ, ರಾಜ್ಯದ ಬೇರೆ ಊರುಗಳಲ್ಲೂ ಪ್ರೀಮಿಯರ್‍ ಪ್ರದರ್ಶನಗಳು ಆಯೋಜಿತವಾಗುತ್ತಿವೆ.

‘ಟಗರು ಪಲ್ಯ’ ಚಿತ್ರದಲ್ಲಿ ಉಮೇಶ್ ಕೆ ಕೃಪ ಆಕ್ಷನ್-ಕಟ್ ಹೇಳಿದ್ದಾರೆ. ನಾಗಭೂಷಣ, ಅಮೃತಾ ಪ್ರೇಮ್ ಜೊತೆಗೆ ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ, ವೈಜನಾಥ್ ಬಿರಾದಾರ್, ವಾಸುಕಿ ವೈಭವ್, ಚಿತ್ರಾ ಶೆಣೈ, ರಾಧಾ ರಾಮಚಂದ್ರ, ಹುಲಿ ಕಾರ್ತಿಕ್‍, ಮಹಾಂತೇಶ್‍ ಸೇರಿದಂತೆ ದೊಡ್ಡ ತಾರಾಬಳಗವಿದೆ.

ಇತ್ತೀಚೆಗಷ್ಟೇ, ‘ಚಾಲೆಂಜಿಂಗ್ ಸ್ಟಾರ್’ ದರ್ಶನ್‍ ಈ ಚಿತ್ರದ ಟ್ರೇಲರ್‍ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಸರಸ್ವತಿ ಬಿಟ್ಟು ಲಕ್ಷ್ಮೀ ಹಿಂದೆ ಹೋಗಿ ತಪ್ಪು ಮಾಡಿಬಿಟ್ಟೆ: ಅಣಜಿ ನಾಗರಾಜ್‍

Latest Post

You may also like

0 Comments

Leave a Reply

This site uses Akismet to reduce spam. Learn how your comment data is processed.

%d