ಯಶ್‍ ಮಾತನ್ನು ನಿಜ ಮಾಡಲು ಹೊರಟ ಅಪ್ಪಟ ಅಭಿಮಾನಿ …

ಚಂದನವನ, ಸಿನಿ ಸುದ್ದಿ

ಯಶ್‍ ಒಂದು ಮಾತು ಹೇಳಿದ್ದರಂತೆ. ‘ನನ್ನ ಅಭಿಮಾನಿಗಳು ಫ್ರಾಡ್‍ ಅಥವಾ ಫೇಕ್ ಅಲ್ಲ. ನನ್ನ ಅಭಿಮಾನಿ ಎದೆ ತಟ್ಕೊಂಡು ಬೆಳೀತಾನೆ’ ಎಂದಿದ್ದರಂತೆ. ಅದನ್ನು ನಿಜ ಮಾಡಲು ಹೊರಟಿದ್ದಾರೆ ಅವರ ಅಪ್ಪಟ ಅಭಿಮಾನಿ ರೋಶನ್‍ ರಾಜ್‍.

ರೋಶನ್‍, ಗೌರಬಿದನೂರಿನವರು. ಸಿನಿಮಾ ಮಾಡಬೇಕು ಎಂಬುದು ಅವರ ಕನಸು. ‘ಭೈರ್ಯ ಕೆಎ-07’ ಎಂಬ ಚಿತ್ರದ ಹೀರೋ ಆಗಿದ್ದಾರೆ. ಶ್ರೀ ಶನೀಶ್ವರ ಸಿನಿಮಾಸ್‍ನಡಿ ಷರೀಫಾ ಬೇಗಂ ನದಾಫ್‍ ಈ ಚಿತ್ರವನ್ನು ನಿರ್ಮಿಸಿದ್ದು, ಇತ್ತೀಚೆಗೆ ಚಿತ್ರದ ಮೋಷನ್‍ ಪೋಸ್ಟರ್‍ ಬಿಡುಗಡೆಯಾಗಿದೆ.

ಮೋಷನ್‍ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರೋಶನ್‍, ‘ನನಗೆ ತಂದೆ-ತಾಯಿ ಇಬ್ಬರೂ ಇಲ್ಲ. ಸಿನಿಮಾ ಎಂದರೆ ಹುಚ್ಚು. ಹೋಟೆಲ್‍ ಮಾಣಿಯಾಗಿ ಕೆಲಸ ಮಾಡಿದವನು ನಾನು. ಬಹಳ ಕಷ್ಟಪಟ್ಟು ಈ ಹಂತದವರೆಗೂ ಬಂದಿದ್ದೇನೆ. ನಾನು ಯಶ್‍ ಅವರ ಅಪ್ಪಟ ಅಭಿಮಾನಿ. ಅವರ ಮಾತನ್ನು ನಾನು ನಿಜ ಮಾಡುತ್ತೇನೆ’ ಎಂದರು.

1970ರ ದಶಕದಲ್ಲಿ ಕೆಜಿಎಫ್‍ನಲ್ಲಿ ನಡೆದ ಘಟನೆಗಳನ್ನಿಟ್ಟುಕೊಂಡು ಅವರು ಈ ಚಿತ್ರ ಮಾಡುತ್ತಿದ್ದಾರಂತೆ. ’69 ದಿನಗಳ ಕಾಲ ನಾನು ಕೋಣೆ ಬಿಟ್ಟು ಆಚೆ ಬರದೆ ಕೂತು ಕಥೆ-ಚಿತ್ರಕಥೆ ಮಾಡಿದ್ದೇನೆ. ಆಗಿನ ಕಾಲದಲ್ಲಿ ಚಿನ್ನದ ಗಣಿಗಳನ್ನು ಯಾರು ರಕ್ಷಿಸುತ್ತಿದ್ದರು. ಆಗ ಏನೆಲ್ಲ ಆಯಿತು ಎಂಬುದನ್ನು ಈ ಚಿತ್ರದಲ್ಲಿ ತೋರಿಸುವುದಕ್ಕೆ ಹೊರಟಿದ್ದೇನೆ. ಈ ಚಿತ್ರವನ್ನು ‘ಕೆಜಿಎಫ್‍’ಗೆ ಹೋಲಿಕೆ ಮಾಡುವುದಿಲ್ಲ. ಆದರೆ, ಚಿನ್ನದ ಗಣಿಗಳ ಕುರಿತಾದ ಒಂದು ಕಥೆ ಇದು. ಈಗಾಗಲೇ ಕ್ಲೈಮ್ಯಾಕ್ಸ್ ಸೇರಿದಂತೆ ಬಹುತೇಕ ಚಿತ್ರೀಕರಣ ಮುಗಿದಿದೆ. 15 ದಿನಗಳ ಚಿತ್ರೀಕರಣ ಬಾಕಿ ಇದೆ’ ಎಂದು ಮಾಹಿತಿ ಕೊಟ್ಟರು.

ಇಲ್ಲಿ ಭೈರ್ಯ ಎನ್ನುವುದು ನಾಯಕನ ಹೆಸರಂತೆ. ಆತ ಕೆಜಿಎಫ್‍ ರಕ್ಷಿಸುತ್ತಾನಂತೆ. 70ರ ದಶಕದಲ್ಲಿ ಕಥೆ ಪ್ರಾರಂಭವಾಗಿ 1985ಕ್ಕೆ ಮುಗಿಯುತ್ತದಂತೆ. ಈ ಚಿತ್ರವನ್ನು ನಿರ್ದೇಶಿಸಿರುವುದು ಆರ್ ಕ್ರಿಯೇಟಿವ್ಸ್. ಅದ್ಯಾರೆಂದು ರೋಶನ್‍ ಹೇಳುವುದಿಲ್ಲ. ಮುಂದಿನ ದಿನಗಳಲ್ಲಿ ಹೇಳುವುದಾಗಿ ಹೇಳುತ್ತಾರೆ.

‘ಭೈರ್ಯ ಕೆಎ 07’ ಚಿತ್ರದಲ್ಲಿ ರೋಶನ್‍ಗೆ ನಾಯಕಿಯಾಗಿ ಆಶಿಕಾ ರಾವ್‍ ನಟಿಸಿದ್ದು, ವಿಶಾಕ್‍ ನಾಗಲಾಪುರ ಅವರ ಸಂಗೀತ, ಅಮರ್‍ ಛಾಯಾಗ್ರಹಣವಿದೆ.

 

ಸರಸ್ವತಿ ಬಿಟ್ಟು ಲಕ್ಷ್ಮೀ ಹಿಂದೆ ಹೋಗಿ ತಪ್ಪು ಮಾಡಿಬಿಟ್ಟೆ: ಅಣಜಿ ನಾಗರಾಜ್‍

Latest Post

You may also like

0 Comments

Leave a Reply

This site uses Akismet to reduce spam. Learn how your comment data is processed.

%d