ಮಲೆನಾಡ ಭಾಗದ ಒಂದು ವಿಶಿಷ್ಟ ಸಂಪ್ರದಾಯ ಕೆರೆಬೇಟೆ. ವರ್ಷಕ್ಕೊಮ್ಮೆ ದೊಡ್ಡ ಕೆರೆಗಳಲ್ಲಿ ಮೀನು ಬೇಟೆಯಾಡುವ ಈ ವಿಶಿಷ್ಟ ಪದ್ಧತಿಯನ್ನು ಮೂಲವಾಗಿಟ್ಟುಕೊಂಡು ಇದೀಗ ಸದ್ದಿಲ್ಲದೆ ಒಂದು ಚಿತ್ರ ತಯಾರಾಗಿದೆ. ಅದೇ ‘ಕೆರೆಬೇಟೆ’.
ಈ ‘ಕೆರೆಬೇಟೆ’ಯನ್ನು ನಾಡಿಗೆ ಪರಿಚಯಿಸುತ್ತಿರುವವರು ಗೌರಿಶಂಕರ್. ಐದು ವರ್ಷಗಳ ಹಿಂದೆ ‘ರಾಜ ಹಂಸ’ ಚಿತ್ರದಲ್ಲಿ ನಾಯಕನಾಗಿದ್ದ ಗೌರಿ, ಆ ನಂತರ ಯಾವುದೇ ಚಿತ್ರ ಮಾಡಿರಲಿಲ್ಲ. ಒಂದೆರಡು ವರ್ಷಗಳಿಂದ ಇದೇ ‘ಕೆರೆಬೇಟೆ’ಗೆ ತಯಾರಿ ನಡೆಸುತ್ತಿದ್ದ ಗೌರಿ, ಇದೀಗ ಚಿತ್ರವನ್ನು ಮುಗಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ, ಸಿಗಂದೂರು ಮುಂತಾದ ಕಡೆ ಸಂಪೂರ್ಣ ಚಿತ್ರೀಕರಣ ಮಾಡಲಾಗಿದೆ. ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಜನವರಿಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಅದಕ್ಕೂ ಮೊದಲ ಟೈಟಲ್ ಪೋಸ್ಟರ್ ಮಂಗಳವಾರ, ವಿಜಯದಶಮಿಯ ಅಂಗವಾಗಿ ಬಿಡುಗಡೆಯಾಗಿದೆ.
‘ಕೆರೆಬೇಟೆ’ ಚಿತ್ರವನ್ನು ಬರೆದು ನಿರ್ದೇಶಿಸಿರುವುದು ರಾಜ್‍ಗುರು. ಕಳೆದ 10 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಎ.ಆರ್ ಬಾಬು, ಪವನ್ ಒಡೆಯರ್ ಹಾಗೂ ಇತರೆ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ರಾಜ್ ಗುರು ಅವರಿಗಿದೆ. ಇದೀಗ ‘ಕೆರೆಬೇಟೆ’ ಎನ್ನುವ ವಿಭಿನ್ನ ಕಾನ್ಸೆಪ್ಟ್‌ನ ಸಿನಿಮಾ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿದ್ದಾರೆ. ಈ ಚಿತ್ರಕ್ಕೆ ಅವರು ಕಥೆ ಬರೆದರೆ, ಚಿತ್ರಕಥೆ ಮತ್ತು ನಿರ್ದೇಶನ ಜವಾಬ್ದಾರಿಯನ್ನು ಗೌರಿಶಂಕರ್ ನಿಭಾಯಿಸಿದ್ದಾರೆ.
ಚಿತ್ರಕಥೆ, ಸಂಭಾಷಣೆ ಮತ್ತು ನಟನೆಯಷ್ಟೇ ಅಲ್ಲ, ಗೌರಿಶಂಕರ್ ಈ ಚಿತ್ರದ ನಿರ್ಮಾಪಕರೂ ಹೌದು. ಈ ಚಿತ್ರವನ್ನು ಅವರು ಜೈ ಶಂಕರ್ ಪಟೇಲ್ ಜೊತೆಗೆ ಸೇರಿ ಜನಮನ ಸಿನಿಮಾ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ಸಂಯೋಜಿಸಿದ್ದು, ಕೀರ್ತನ್ ಪೂಜಾರ್ ಛಾಯಾಗ್ರಹಣ ಮಾಡಿದ್ದಾರೆ.
ಸರಸ್ವತಿ ಬಿಟ್ಟು ಲಕ್ಷ್ಮೀ ಹಿಂದೆ ಹೋಗಿ ತಪ್ಪು ಮಾಡಿಬಿಟ್ಟೆ: ಅಣಜಿ ನಾಗರಾಜ್
0 Comments