ಕಳೆದ ವರ್ಷ ಬಿಡುಗಡೆಯಾದ ‘ಶಿವ 143’ ಚಿತ್ರದ ನಂತರ ಡಾ. ರಾಜ್ ಮೊಮ್ಮಗ ಹಾಗೂ ರಾಮ್‍ಕುಮಾರ್ ಅವರ ಮಗ ಧೀರೇನ್ ಸುದ್ದಿಯೇ ಇರಲಿಲ್ಲ. ‘ಬಡವ ರಾಸ್ಕಲ್’ ಚಿತ್ರದ ನಿರ್ದೇಶಕ ಶಂಕರ್ ಗುರು ನಿರ್ದೇಶನದ ಹೊಸ ಚಿತ್ರದಲ್ಲಿ ಧೀರೇನ್ ರಾಮ್‍ಕುಮಾರ್ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ, ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರ ಹಠಾತ್ ಅನಾರೋಗ್ಯದಿಂದ ಈ ಚಿತ್ರ ನೆನೆಗುದಿಗೆ ಬಿದ್ದಿದೆ. ಧೀರೇನ್ ಅವರ ಮುಂದಿನ ನಡೆ ಏನಿರಬಹುದು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.
ಧೀರೇನ್, ‘ಬಹದ್ದೂರ್’ ಚೇತನ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗುತ್ತಿದ್ದಾರೆc. ಈ ಕುರಿತು ಮಂಗಳವಾರ ಅಧಿಕೃತ ಪ್ರಕಟಣೆಯೂ ಹೊರಬಿದ್ದಿದೆ. ಈ ಚಿತ್ರವನ್ನು ಯಾರು ನಿರ್ಮಿಸುತ್ತಾರೆ? ಹೆಸರೇನು? ಯಾರೆಲ್ಲಾ ನಟಿಸುತ್ತಾರೆ? ಎಂಬ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರವಿಲ್ಲ. ಬರೀ ಘೋಷಣೆಯಷ್ಟೇ ಆಗಿದೆ.
ಅಂದಹಾಗೆ, ಈ ಚಿತ್ರ ಪ್ರಾರಂಭವಾಗುವುದಕ್ಕೆ ಇನ್ನೂ ಹಲವು ತಿಂಗಳುಗಳು ಬೇಕು. ಏಕೆಂದರೆ, ಚೇತನ್ ಸದ್ಯ ‘ಬರ್ಮ’ ಎಂಬ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ರಕ್ಷ್ ರಾಮ್ ಅಭಿನಯದ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಮಂಗಳೂರಿನಲ್ಲಿ ಮುಗಿದಿದೆ. ಸದ್ಯದಲ್ಲೇ ಎರಡನೆಯ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಚಿತ್ರದ ಚಿತ್ರೀಕರಣ ಜನವರಿ ಹೊತ್ತಿಗೆ ಮುಗಿದು, ಮೇನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಆ ನಂತರವಷ್ಟೇ ಏನಿದ್ದರೂ ಧೀರೇನ್ ಜೊತೆಗೆ ಹೊಸ ಚಿತ್ರ ಶುರುವಾಗಲಿದೆ.
ಈ ಮಧ್ಯೆ, ಧೀರೇನ್ ಸಖತ್ ವರ್ಕೌಟ್ ಮಾಡಿ ಕಟ್ಟುಮಸ್ತಾಗಿ ಬಾಡಿ ಬಿಲ್ಡ್ ಮಾಡಿದ್ದಾರೆ. ‘ಶಿವ 143’ ಚಿತ್ರದಲ್ಲಿ ನೋಡಿದ್ದು ಇವರನ್ನೇನಾ? ಎನ್ನುವಷ್ಟು ಬದಲಾಗಿದ್ದಾರೆ. ಇನ್ನು, ಚಿತ್ರೀಕರಣ ಪ್ರಾರಂಭವಾಗುವುಷ್ಟರಲ್ಲಿ ಇನ್ನೆಷ್ಟು ಬದಲಾಗಿರುತ್ತಾರೋ ಗೊತ್ತಿಲ್ಲ.
ಸರಸ್ವತಿ ಬಿಟ್ಟು ಲಕ್ಷ್ಮೀ ಹಿಂದೆ ಹೋಗಿ ತಪ್ಪು ಮಾಡಿಬಿಟ್ಟೆ: ಅಣಜಿ ನಾಗರಾಜ್
0 Comments